Projects

ವಿದ್ಯೆ

ಭಾರತೀಯ ಸನಾತನ ಧರ್ಮ – ಸಂಸ್ಕೃತಿ – ಸಂಪ್ರದಾಯಗಳ ಮೂಲ – ವೇದಗಳು, ಶಾಸ್ತ್ರ ಪುರಾಣಗಳು, ಕಾವ್ಯಗ್ರಂಥಗಳು ಹಾಗೂ ಸಂಸ್ಕ್ರತ ಬಾಷೆ. ಇವುಗಳ ಅಧ್ಯಯನ ಹಾಗೂ ಪಾರಿಜ್ನಾನ ಧಾರ್ಮಿಕ, ಆಧ್ಯಾತ್ಮಿಕ ಜಾಗೃತಿಗೆ ಅತ್ಯವಶ್ಯಕ ಎಂದು ಭಾವಿಸಿದ ಶ್ರೀ ಶ್ರೀಧರ ಸದ್ಗುರುಗಳು ಆಶ್ರಮದಲ್ಲಿ ಪ್ರಾರಂಭಿಸಿದ ವೇದ, ವೇದಾಂಗ, ಸಂಸ್ಕೃತ ಪಾಠಗಳನ್ನು ಬೋಧಿಸುವ ಗುರುಕುಲ ಪದ್ಧತಿಯ ಪಾಠಶಾಲೆ.

ನಿತ್ಯಾನ್ನದಾನ

ಆಶ್ರಮದ ಪರಿಶುದ್ಧವಾದ ವಾತಾವರಣಕ್ಕೆ ಬಂದತಹ ಭಕ್ತಜನತೆಯ ಕಷ್ಟಕೋಟಲೆಗಳು, ತಾತ್ಕಾಲಿಕವಾಗಿ ಪರಿಹೃತವಾದರೆ ಸಾಲದು, ಅವರು ಸಾತ್ವಿಕರಾಗಿ ಶಾಶ್ವತ ಸುಖವನ್ನು ಪಡೆಯಬೇಕು. ಇದಕ್ಕೆ ಸಾತ್ವಿಕಾಹಾರ ಸೇವನೆ ಬಹುಮುಖ್ಯ ಎಂದು ಶಾಸ್ತ್ರೀಯವಾಗಿ ಆಲೋಚಿಸಿದ ಶ್ರೀ ಶ್ರೀಧರಸದ್ಗುರುಗಳು ಆಶ್ರಮಕ್ಕೆ ಬಂದಂತಹ ಎಲ್ಲ ವರ್ಗದ ಭಕ್ತ ಸಂಕುಲಕ್ಕೆ ಅನ್ನಪ್ರಸಾದ ಭೋಜನ ಉಚಿತವಾಗಿ ಲಭ್ಯವಾಗುವಂತೆ ಏರ್ಪಾಟು ಮಾಡಿಸಿದ್ದರು. ಇಂದೂ ಕೂಡ ಅದು ಮುಂದುವರೆದಿದೆ.

ಗೋಶಾಲೆ

ವಿಶ್ವಮಾತೆಯಾದ ಗೋವುಗಳ ಸೇವೆಯು ( ಗಾವೋ ವಿಶ್ವಸ್ಯ ಮಾತರಃ ) ಅನುದಿನವೂ ನಡೆಯುತ್ತಲಿರಬೇಕು. ಈ ಸತ್ಕಾರ್ಯದಿಂದ ವೃದ್ಧಿ-ಸಮೃದ್ಧಿಗಳು ಸಂವರ್ಧಿಸುತ್ತದೆ – ಎಂಬ ಭಾವನೆ ಆಶ್ರಮದಲ್ಲಿ ಗೋಪಾಲನ ಕಾಯಕಕ್ಕೆ ಮೂಲ. ಗೋಪೂಜೆಯನ್ನು ಮಾಡಿ, ಗೋಗ್ರಾಸ ನೀಡಿದ ಅನಂತರವೇ ಶ್ರೀ ಶ್ರೀಧರ ಸದ್ಗುರುಗಳು ಭಿಕ್ಷಾಸೇವನೆ ಮಾಡುತ್ತಿದ್ದರು. ಈಗಲೂ ವಿವಿಧ ತಳಿಯ ಗೋವುಗಳು ಆಶ್ರಮದ ಗೋಶಾಲೆಯಲ್ಲಿದ್ದು ಸೇವೆಯನ್ನು ಪಡೆದು ಭಕ್ತಜನತೆಯನ್ನು ಹರಿಸುತ್ತಿವೆ.

ಶ್ರೀಧರ ಆರೋಗ್ಯ

ಸೇವೆ ಆರಂಭಿಸಿದ್ದು – 2004

ಒಟ್ಟು ಶಿಬಿರಗಳು – 500

ಚಿಕಿತ್ಸೆ ಪಡೆದ ರೋಗಿಗಳು – 16 ಸಾವಿರ

ವಿತರಿಸಿದ ಉಚಿತ ಔಷಧಿ + ಸೇವೆ ಮೌಲ್ಯ – 20 ಲಕ್ಷ