ಸೇವೆಯ ಬಗ್ಗೆ ಮಾಹಿತಿ / Description About Seva
ಶ್ರೀ ಭಗವಾನರು ಶಕ್ತಿಯಿದ್ದವರು ಪ್ರತಿ ದಿನ ಕೇವಲ ಒಂದೇ ಒಂದು ರೂಪಾಯಿಗಳನ್ನು ಶ್ರೀ ಶ್ರೀಧರಾಶ್ರಮದ ಸೇವೆಗೆ ಮುಡುಪಾಗಿ ತೆಗೆದಿಟ್ಟು ವರ್ಷದ ನಂತರ ಶ್ರೀಗುರು ಸನ್ನಿಧಿಗೆ ಅರ್ಪಿಸಬಹುದೆಂತಲೂ ಇದನ್ನು ನಡೆಸಲು ಅನುಕೂಲವಿಲ್ಲದಿದ್ದವರು ವರ್ಷದ ಮೊದಲೇ ದಿನಕ್ಕೊಂದು ರೂಪಾಯಿಗಳಂತೆ ಶ್ರೀ ಆಶ್ರಮಕ್ಕೆ ಅರ್ಪಿಸಬಹುದೆಂತಲೂ ಈ ಸೇವೆಗಳನ್ನು ಮಾಡಲು ಶಕ್ತಿಯಿಲ್ಲದಿದ್ದವರು ವರ್ಷಕ್ಕೆ ಕೇವಲ ಒಂದೇ ಒಂದು ರೂಪಾಯಿಗಳನ್ನು ಶ್ರೀ ಶ್ರೀಧರಾಶ್ರಮ ಸೇವೆಗೆ ಸಲ್ಲಿಸಬಹುದೆಂತಲೂ ಇಲ್ಲಿ ಹಣಕ್ಕಿಂತ ಮುಖ್ಯವಾಗಿ ಭಕ್ತಿಯೇ ಪ್ರಾಮುಖ್ಯವೆಂತಲೂ ಶ್ರೀ ಭಗವಾನರ ಆದೇಶದ ಮೇರೆಗೆ ಶ್ರೀ ಶ್ರೀಧರಾಶ್ರಮದಲ್ಲಿ ಸೇವೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಶ್ರೀ ಆಶ್ರಮವು ತನ್ನ ಎಲ್ಲಾ ಭಕ್ತರಿಗೂ ತಮ್ಮದೇ ಆಶ್ರಮವೆಂಬ ಭಾವನೆ ಬರಲೆಂದು ಶ್ರೀ ಗುರುಗಳು ಅನುಗ್ರಹಿಸಿದ ವಿಶೇಷ ಸೇವೆಯಾಗಿರುತ್ತದೆ.
Bhagawan Sadguru Shri Shridhara Swamijy ordained to his Bhaktas who are economically well sufficiant they can offer one rupee per day to Shri Shridharashrama as Guru Seva, those who unable they can offer one rupee per year as Shri Guruseva. The Main intention of Swamijy every his Bhaktas must think that this Shri Shridharashrama belongs to himself. Here the main intention of Shri Bhagawan is only Bhakti(devotion) not money. From that day this seva is started.