ಬಿಕ್ಷಾಸೇವಾ (ಒಂದು ದಿನದ ಅನ್ನ ಸಂತರ್ಪಣೆ) / Bhiksha Seva

1,500.00

Category:

ಸೇವೆಯ ಬಗ್ಗೆ ಮಾಹಿತಿ / Description About Seva

ಶ್ರೀ ಭಗವಾನರ ಸನ್ನಿಧಿಯಲ್ಲಿ ಶ್ರೀ ಭಗವಾನರಿಗೆ ಪ್ರತಿದಿನ ಮಧ್ಯಾಹ್ನ ಭಿಕ್ಷಾಸೇವೆಯನ್ನು ಸಮರ್ಪಿಸಲಾಗುತ್ತದೆ. ಶ್ರೀ ಭಗವಾನರ ಕಾಲದಿಂದಲೂ ಅವರೇ ಸ್ವತಃ ಹಾಕಿರುವ ನಿಯಮದಂತೆ ಈ ಭಿಕ್ಷಾ ಸೇವೆಯ ವಿಧಿ ವಿಧಾನಗಳು ನಡೆದುಕೊಂಡು ಬರುತ್ತಿದ್ದು ಇಂದಿಗೂ ಕೂಡಾ ಅದೇ ರೀತಿ ಚಾಚೂ ತಪ್ಪದೇ ನಡೆಯುತ್ತಿದೆ. ಯತಿಗಳಿಗೆ ಭಿಕ್ಷಾ ಸೇವೆಯನ್ನು ಮಾಡುವುದರಿಂದ ಸೇವೆ ಲ್ಲಿಸುವವನ ಕುಲಕೋಟಿ ಪಾವನವಾಗುತ್ತದೆಯೆಂಬುದು ಶಾಸ್ತ್ರಗಳ ಮತ್ತು ಪೂರ್ವಸೂರಿಗಳ ಆದೇಶವಾಗಿರುತ್ತದೆ. ಅದರಂತೆ ಶ್ರೀ ಭಗವಾನರಿಗೆ ಭಿಕ್ಷಾಸೇವೆಯನ್ನು ಸಲ್ಲಿಸುವ ಸಂದರ್ಭದಲ್ಲಿ ಸೇವಾದಾರರು ಉಪಸ್ಥಿತರಿದ್ದು ಭಿಕ್ಷಾ ವಂದನೆಯನ್ನು ಮಾಡಬಹುದಾಗಿರುತ್ತದೆ. ಅವರ ಅನುಪಸ್ಥಿತಿಯಲ್ಲಿ ಶ್ರೀ ಆಶ್ರಮದ ಅರ್ಚಕರೆ ಭಿಕ್ಷಾ ವಂದನೆಯನ್ನು ಸೇವಾದಾರರ ಹೆಸರಿನಲ್ಲಿ ಮಾಡುತ್ತಾರೆ. ಭಿಕ್ಷಾವಂದನಾ ಕಾಲದಲ್ಲಿ ಪುರುಷರು ತೊಳೆದು ಹಾಕಿದ ಅಥವಾ ಹೊಸ ಪಂಚೆ, ಶಲ್ಯ, ಮಡಿ ಯಾವುದಾದರನ್ನು ಧರಿಸಬೇಕು. ಸ್ತ್ರೀಯರು ಸೀರೆ, ಲಂಗ, ದಾವಣಿ ಧರಿಸಿರಬೇಕು. ಪ್ಯಾಂಟ್, ಪೈಜಾಮ, ಚಡ್ಡಿ, ಚೂಡಿದಾರ್ ಇವುಗಳನ್ನು ಧರಿಸಿ ಭಿಕ್ಷಾವಂದನವನ್ನು ಸಲ್ಲಿಸಲು ಬರುವುದಿಲ್ಲ. ಇಂತಹ ಸಂದರ್ಭ ಶ್ರೀ ಆಶ್ರಮದ ವತಿಯಿಂದಲೇ ಭಿಕ್ಷಾ ವಂದನೆಯನ್ನು ಸಲ್ಲಿಸಲಾಗುವುದು. ನಂತರ ಶ್ರೀ ಆಶ್ರಮದ ಭೋಜನ ಶಾಲೆಯಲ್ಲಿ ಭಕ್ತಾದಿಗಳಿಗೆ ಮಹಾಪ್ರಸಾದದ ವಿನಿಯೋಗವಾಗುತ್ತದೆ. ಏಕಾದಶಿ, ಶ್ರೀ ದತ್ತ ಜಯಂತಿಯ ದಿನ, ಶ್ರೀರಾಮನವಮಿ, ಗ್ರಹಣ, ಶ್ರೀ ಮಹಾಶಿವರಾತ್ರಿ ಮತ್ತು ಕೆಲವು ಭೋಜನ ನಿಷಿದ್ಧವಾದ ದಿನಗಳಲ್ಲಿ ಈ ಸೇವೆ ನಡೆಯುವುದಿಲ್ಲ. ದ್ವಾದಶಿಯಂದು ಪ್ರಾತಃಕಾಲದಲ್ಲಿ ಭಿಕ್ಷಾಸೇವೆಯು ನಡೆಯುತ್ತದೆ. ಶ್ರೀದತ್ತ ಜಯಂತಿ, ಶ್ರೀಗುರುಗಳ ಆರಾಧನಾ ಸಮಯದ ದ್ವಾದಶಿಗಳಂದು ಮಧ್ಯಾಹ್ನ ಭಿಕ್ಷಾ ಸೇವೆ ನಡೆಯುತ್ತದೆ. ಈ ಸೇವೆಯನ್ನು ಸೇವಾ ಕರ್ತರು ಅಪೇಕ್ಷಿಸಿದ ದಿನದಂದು ಸಲ್ಲಿಸಲಾಗುವುದು.

According Hindu Dharmashastra offering Bhiksha to Sanyasi is a holy work, it enhance Ayushya, Arogya, Aishwarya and it eradicates all the sin(Papam) In Bhagawan Sadguru Shri Swamijy’s Sannidhanam in the time of Madhyanha Pooja Bhiksha Seva will be offered to Shri Bhagawan. In the time of doing this Seva dress code ordained by Bhagawan Sadguru Shri Shridhar Swamijy gents-Dhoti and Shalya/towel or (silk, spun dhoti) Ladies-Saree. This Seva will not be held on Ekadashi, Shri Datta Jayanthi, Shri Ramanavami, Shri Mahashivarathri, Shri Krishnastami, Solar and Lunar eclipse and other days prohibited by Hindu Shastras to take meals. On the day of Dwadashi in the time of Pratha Pooja will be offered to Shri Bhagawan (7.00 a.m to 7.30 a.m) This seva can be done on any day given by Sevadar’s.