ಸೇವೆಯ ಬಗ್ಗೆ ಮಾಹಿತಿ / Description About Seva
ಶ್ರೀ ಭಗವಾನರ ಸನ್ನಿಧಿಯಲ್ಲಿ ಶ್ರೀ ಭಗವಾನರ ಸಮಾಧಿ ಲಿಂಗಕ್ಕೆ ಮತ್ತು ಶ್ರೀ ಭಗವಾನರ ದಿವ್ಯ ಪಾದುಕೆಗಳಿಗೆ
ಶ್ರೀರುದ್ರಾದಿ ವೇದ ಮಂತ್ರಗಳಿಂದ ಅಭಿಷೇಕ ನಡೆಯುತ್ತದೆ. ಅಭಿಷೇಕದಿಂದ ಮನುಷ್ಯನ ಪೂರ್ವಪಾಪಗಳು
ನಿವಾರಣೆಯಾಗಿ ಪುಣ್ಯ ವೃದ್ಧಿಯಾಗುತ್ತದೆಯೆಂತಲೂ ಅಜ್ಞಾನ ನಿವಾರಣೆಯಾಗಿ ಜ್ಞಾನ
ವೃದ್ಧಿಯಾಗುತ್ತದೆಯೆಂತಲೂ ಮೃತ್ಯು ದೋಷ ನಿವಾರಣೆಯಾಗಿ ಆಯುಷ್ಯ
ಅಭಿವೃದ್ಧಿಯಾಗುತ್ತದೆಯೆಂತಲೂ ಶಾಸ್ತ್ರಗಳು ಹೇಳುತ್ತವೆ. ಶಾಸ್ತ್ರಾಧಾರದಂತೆ ಶ್ರೀ ಭಗವಾನರ ಸನ್ನಿಧಿಯಲ್ಲಿ
ತ್ರಿಕಾಲ ಅಭಿಷೇಕ ಸೇವೆ ನಡೆಯುತ್ತದೆ. ಒಂದು ಹೊತ್ತಿನ ಅಭಿಷೇಕ ಸೇವೆಯನ್ನು ತಮ್ಮ ಹೆಸರಿನಲ್ಲಿ ಈ ಸೇವಾ
ಯೋಜನೆಯಡಿಯಲ್ಲಿ ನಡೆಸಲಾಗುತ್ತದೆ.
In Bhagawan Sadguru Shri Swamijy's Sannidhanam reciting SRI RUDRA
MANTRAM and other SUKTHAS Abhisheka Seva will be perform to Shri
Bhagawan's Samadhi Lingam and Divya Padukas. According to Agama and Hindu
Archana Shastras Abhisheka eradicates Papa(Sin) Grahacharam and Mrutyu and
enhances Punya with Ayushya etc. This Seva will be conducted 3 times a day. One
time seva will be done in the name of Sevadar's.